Stenographer Jobs: ತುಮಕೂರು ಜಿಲ್ಲಾ ಕೋರ್ಟ್ನಲ್ಲಿ ಸ್ಟೆನೋಗ್ರಾಫರ್, ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ತುಮಕೂರು: ತುಮಕೂರು ಜಿಲ್ಲಾ ಕೋರ್ಟ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 10 ಸ್ಟೆನೋಗ್ರಾಫರ್, 05 ಬೆರಳಚ್ಚುಗಾರ ಹುದ್ದೆ, 05 ಬೆರಳಚ್ಚು-ನಕಲುಗಾರ ಹುದ್ದೆ, 40 ಪಿಯೋನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 10, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್(Online) ಮೂಲಕ ಅಪ್ಲೈ ಮಾಡಬೇಕು. ಆನ್‌ಲೈನ್ ಹೊರತುಪಡಿಸಿ, ಖುದ್ದಾಗಿ, ಅಂಚೆ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ ಇಲ್ಲಿದೆ.
ಶೀಘ್ರಲಿಪಿಗಾರ-ಗ್ರೇಡ್-III
| ಹುದ್ದೆಯ ಮಾಹಿತಿ: ಶೀಘ್ರಲಿಪಿಗಾರ-ಗ್ರೇಡ್-III ಒಟ್ಟು ಹುದ್ದೆ- 10 (ಹೊಸ ಹುದ್ದೆಗಳು 6 + ಬ್ಯಾಕ್ ಲಾಗ್ ಹುದ್ದೆಗಳು 4) |
|---|
| ವರ್ಗಿಕರಣ: ಬ್ಯಾಕ್ ಲಾಗ್ ಹುದ್ದೆಗಳು : ಪರಿಶಿಷ್ಟ ಪಂಗಡ - ಗ್ರಾಮೀಣ – 1 ಪ್ರವರ್ಗ-2ಬಿ - ಮಹಿಳೆ - 1 -ಗ್ರಾಮೀಣ – 1 ಸಾಮಾನ್ಯ ಅಭ್ಯರ್ಥಿ - ಅಂಗವಿಕಲ - 1 ಹೊಸ ಹುದ್ದೆಗಳು : ಪರಿಶಿಷ್ಟ ಜಾತಿ – ಇತರೆ - 1 ಪರಿಶಿಷ್ಟ ಪಂಗಡ - ಇತರೆ – 1 ಪ್ರವರ್ಗ – 1 ಸಾಮಾನ್ಯ ಅಭ್ಯರ್ಥಿ - ಇತರೆ – 1 - ಮಹಿಳೆ - 1- ಗ್ರಾಮೀಣ – 1 |
| ವಿದ್ಯಾರ್ಹತೆ: 1. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 3 ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. 2. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಹಾಗೂ ಆಂಗ್ಲ ಭಾಷೆಯ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಹಿರಿಯ ಶ್ರೇಣಿ ಶೀಘ್ರಲಿಪಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. |
| ವೇತನ: 27650-52650 |