Headlines

7ನೇ ವೇತನ ಆಯೋಗದ ಶಿಫಾರಸಿಗೆ ₹18,000 ಕೋಟಿ ಅಗತ್ಯ: ಡಾ. ಜಿ. ಪರಮೇಶ್ವರ್

ತುಮಕೂರು: ಸರ್ಕಾರದ ಮುಂದೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ₹18,000 ಕೋಟಿ ಬೇಕು. ಜೊತೆಗೆ ಬಿಪಿಎಸ್ ಜಾರಿಗೆ ನೂರಾರು ಕೋಟಿ ರೂಪಾಯಿಗಳು ಅಗತ್ಯವಿದೆ. ಆದ್ದರಿಂದ ಒಂದೇ ದಿನದಲ್ಲಿ ಎಲ್ಲಾ ಜಾರಿಗೆ ತರಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರವೇ 6ನೇ ವೇತನ ಆಯೋಗವನ್ನು ಜಾರಿಗೆ ತಂದಿದೆ. ನಾವು ಯಾರಿಗೂ ಮೋಸ ಮಾಡಲ್ಲ, ತಾಳ್ಮೆಯಿಂದ ಇರಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: Court Jobs : ಉತ್ತರ ಕನ್ನಡ ಕೋರ್ಟ್ ನಲ್ಲಿ ಖಾಲಿ ಇರುವ 26 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ

ನಗರದ ಎಮ್ಪ್ರೆಸ್ ಸಭಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಅಭಿಮಾನಿ ಬಳಗದಿಂದ ಶಿಕ್ಷಕ ವರ್ಗ ಮತ್ತು ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಕಾಂಗ್ರೆಸ್ ಪಕ್ಷದ ಮೇಲೆ ನೀವು ಇಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ” ಎಂಬ ಭರವಸೆ ನೀಡಿದರು. ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ

ತುಮಕೂರು ಜಿಲ್ಲೆಯಲ್ಲಿಯೇ 5300ಕ್ಕೂ ಹೆಚ್ಚು ಮತಗಳು ಡಿ.ಟಿ. ಶ್ರೀನಿವಾಸ್ ಅವರಿಗೆ ಬಂದಿವೆ. ಶಿಕ್ಷಕರು ಬಹಳ ಅಚ್ಚುಕಟ್ಟಾಗಿ, ಶಾಂತಿ ಮತ್ತು ಯಾರಿಗೂ ಗೊತ್ತಾಗದ ರೀತಿಯಲ್ಲಿ ರಾಜಕಾರಣ ಮಾಡಿದ್ದೀರಿ. ಇದು ಬಹಳ ದೊಡ್ಡ ಬದಲಾವಣೆ. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಸ್ವಾತಂತ್ರ್ಯದ ವೇಳೆ ಶೇ.12ರಷ್ಟಿದ್ದ ಸಾಕ್ಷರರ ಸಂಖ್ಯೆಗೆ ಇಂದು ಶೇ.82ಕ್ಕೆ ಮುಟ್ಟಿದೆ.

ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಆಗಿರುವ ಬದಲಾವಣೆಯಿಂದ ಕರ್ನಾಟಕ ಶಕ್ತಿಯುತವಾಗಿದೆ. ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ಇದಕ್ಕೆ ಅನುಗುಣವಾಗಿ ನಮಗೆ ತೆರಿಗೆ ಪಾಲು ವಾಪಸ್ ಬರುತ್ತಿಲ್ಲ ಎಂಬ ವಾದವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದೇವೆ. ಆದರೆ, ದುಡಿಯುವ ಶಕ್ತಿ ಇದೆ. ಅದೇ ರೀತಿಯಾಗಿ ಇತರೆ ರಾಜ್ಯಗಳಿಗೂ ಶಕ್ತಿ ನೀಡಲು ಈ ಹಣ ಬಳಕೆ ಮಾಡುತ್ತಿದ್ದೇವೆ. ಇದು ಒಂದು ರೀತಿಯ ಸಮಾಧಾನ ತಂದಿದೆ. ನಮ್ಮ ರಾಜ್ಯ ಪ್ರಗತಿ ಪಥದಲ್ಲಿದೆ ಎಂಬುದು ಇದರ ಧ್ವನಿಯಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading