ಅಂಕಿತಾ ಅಮರ್ ಹಾಗೂ ಶೈನ್ ಶೆಟ್ಟಿ ಅಭಿನಯದ ‘ಜಸ್ಟ್ ಮ್ಯಾರೀಡ್’ ಟೀಸರ್‌ ಬಿಡುಗಡೆ

ನಟಿ ಅಂಕಿತಾ ಅಮರ್‌ ನಟನೆಯ ಮತ್ತೊಂದು ಚಿತ್ರ ‘ಜಸ್ಟ್ ಮ್ಯಾರೀಡ್’ ಚಿತ್ರಕ್ಕೆ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಿಗ್‌ಬಾಸ್‌ ಖ್ಯಾತಿಯ ನಟ ಶೈನ್‌ ಶೆಟ್ಟಿ ನಾಯಕನಾಗಿ ಅಭಿನಯಿಸಿದ್ದಾರೆ. ಎಬಿಬಿಎಸ್ ಸ್ಟುಡಿಯೊಸ್‌ ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ನಿರ್ಮಾಣ ಮಾಡಿದ ಈ ಚಿತ್ರವನ್ನು ಸಿ.ಆರ್. ಬಾಬಿ ನಿರ್ದೇಶಿಸಿದ್ದಾರೆ.  ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕರು “ನಿಮ್ಮ ಸ್ವಪ್ನವನ್ನು ನನಸು ಮಾಡುವುದು ಮಹತ್ವದ ವಿಷಯ” ಎಂದು ತಮ್ಮ ನಿರ್ದೇಶನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಂಕಿತಾ ಅಮರ್‌ ಚಿತ್ರದಲ್ಲಿ ‘ಸಹನ’ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಚಿತ್ರದಲ್ಲಿ ಶ್ರುತಿ, ದೇವರಾಜ್‌ ಮತ್ತು ಅನೇಕ ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

Leave a Reply

Your email address will not be published. Required fields are marked *