ಭಾರತದ ಮಾಜಿ ಕ್ರಿಕೆಟಿಗ Yusuf Pathan ಅವರು TMC ಪಕ್ಷದಿಂದ ಲೋಕಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

            ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆಗೆ ರಾಜ್ಯದ 42 ಸ್ಥಾನಗಳಿಗೆ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಲೋಕಸಭೆ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಯೂಸುಫ್ ಪಠಾಣ್ ಅವರು ಬಹರಂಪುರದಿಂದ ತೃಣಮೂಲ ಅಭ್ಯರ್ಥಿಯಾಗಿ ಅಧೀರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ನಗರದ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ನಡೆಯುವ ಟಿಎಂಸಿಯ ಬೃಹತ್‌ ರ‍್ಯಾಲಿ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭ್ಯರ್ಥಿಗಳ ಹೆಸರು ಘೋಷಿಸಲಿದ್ದಾರೆ. ಇದರೊಂದಿಗೆ ಟಿಎಂಸಿಯ ಚುನಾವಣಾ ಪ್ರಚಾರವೂ ಆರಂಭವಾಗಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಪಶ್ಚಿಮ ಬಂಗಾಳದ 42 ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಪ್ರಕಟಿಸಲಿದ್ದಾರೆ ಎಂದು ಟಿಎಂಸಿ ಹೇಳಿಕೆ ಬಿಡುಗಡೆ ಮಾಡಿತ್ತು. ಟಿಎಂಸಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಸಾರ್ವಜನಿಕ ಸಾಮಾವೇಶದ ಮೂಲಕ ಘೋಷಿಸುತ್ತಿರುವುದು ಇದೇ ಮೊದಲು. ವಿವಿಧ ಜಿಲ್ಲೆಗಳಿಂದ ಬಂದಿರುವ ಲಕ್ಷಾಂತರ ಬೆಂಬಲಿಗರು ಹಾಗೂ ಕಾರ್ಯಕರ್ತರು, ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಬಹರಂಪುರದಿಂದ ತೃಣಮೂಲ ಅಭ್ಯರ್ಥಿಯಾಗಿ ಅಧೀರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧಿಸಲಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ 42 ಅಭ್ಯರ್ಥಿಗಳ ಪಟ್ಟಿ
ಕೂಚ್ ಬೆಹರ್ – ಜಗದೀಶ್ ಚಂದ್ರ ಬಸುನಿಯಾ
ಅಲಿಪುರ್ದೂರ್ – ಪ್ರಕಾಶ್ ಚಿಕ್ ಬರೈಕ್ (ರಾಜ್ಯಸಭಾ ಸದಸ್ಯ)
ಜಲ್ಪೈಗುರಿ – ನಿರ್ಮಲ್ ಚಂದ್ರ ರೈ (ಶಾಸಕ)
ಡಾರ್ಜಿಲಿಂಗ್ – ಗೋಪಾಲ್ ಲಾಮಾ
ರಾಯಗಂಜ್ – ಕೃಷ್ಣ ಕಲ್ಯಾಣಿ
ಬಲೂರ್ಘಾಟ್ – ಬಿಪ್ಲಬ್ ಮಿತ್ರ (ಸಚಿವ)
ಮಾಲ್ಡಾ ನಾರ್ತ್ – ಪ್ರಸೂನ್ ಬ್ಯಾನರ್ಜಿ (ಮಾಜಿ ಐಪಿಎಸ್ ಅಧಿಕಾರಿ)
ಮಾಲ್ಡಾ ಸೌತ್ – ಶಾನವಾಜ್ ಅಲಿ ರೆಹಮಾನ್
ಜಂಗಿಪುರ – ಖಲೀಲುರ್ ರೆಹಮಾನ್
ಬಹರಂಪುರ್ – ಯೂಸುಫ್ ಪಠಾಣ್ (ಭಾರತದ ಮಾಜಿ ಕ್ರಿಕೆಟಿಗ)
ಮುರ್ಷಿದಾಬಾದ್ – ಅಬು ತಾಹೆರ್ ಖಾನ್
ಕೃಷ್ಣನಗರ – ಮಹುವಾ ಮೊಯಿತ್ರಾ
ರಣಘಾಟ್ – ಮುಕುತ್ ಮಣಿ ಅಧಿಕಾರಿ (ಬಿಜೆಪಿ ಶಾಸಕ)
ಬಂಗಾನ್ – ಬಿಸ್ವಜಿತ್ ದಾಸ್
ಬ್ಯಾರಕ್‌ಪೋರ್ – ಪಾರ್ಥ ಭೌಮಿಕ್ (ಸಚಿವ)
ದಮ್ ದಮ್ – ಸೌಗತ ರಾಯ್ (MP)
ಬರಾಸತ್ – ಕಾಕಲಿ ಘೋಷ್ ದಸ್ತಿದಾರ್ (ಸಂಸದ)
ಬಸಿರ್ಹತ್ – ಹಾಜಿ ನೂರುಲ್ ಇಸ್ಲಾಂ
ಜೋಯನಗರ – ಪ್ರತಿಮಾ ಮೊಂಡಲ್
ಮಥುರಾಪುರ – ಬಾಪಿ ಹಲ್ದಾರ್
ಡೈಮಂಡ್ ಹಾರ್ಬರ್ – ಅಭಿಷೇಕ್ ಬ್ಯಾನರ್ಜಿ
ಜಾದವ್‌ಪುರ- ಸಯೋನಿ ಘೋಷ್ (ಯುವ ಟಿಎಂಸಿ ಅಧ್ಯಕ್ಷರು)
ಕೋಲ್ಕತ್ತಾ ದಕ್ಷಿಣ – ಮಾಲಾ ರಾಯ್ (MP)
ಕೋಲ್ಕತ್ತಾ ಉತ್ತರ – ಸುದೀಪ್ ಬಂಡೋಪಾಧ್ಯಾಯ (ಸಂಸದ)
ಹೌರಾ- ಪ್ರಸೂನ್ ಬ್ಯಾನರ್ಜಿ (ಸಂಸದ)
ಉಲುಬೇರಿಯಾ- ಸಜ್ದಾ ಅಹ್ಮದ್
ಶ್ರೀರಾಮಪುರ – ಕಲ್ಯಾಣ್ ಬ್ಯಾನರ್ಜಿ (ಸಂಸದ)
ಹೂಗ್ಲಿ- ರಚನಾ ಬ್ಯಾನರ್ಜಿ (ನಟಿ)
ಅರಾಂಬಾಗ್- ಮಿತಾಲಿ ಬಾಗ್
ತಮ್ಲುಕ್ – ದೇಬಂಗ್ಶು ಭಟ್ಟಾಚಾರ್ಯ
ಕಂಠಿ – ಉತ್ತಮ್ ಬಾರಿಕ್
ಘಟಾಲ್ – ದೀಪಕ್ ಅಧಿಕಾರಿ (ಸಂಸದ)
ಜಾರ್ಗ್ರಾಮ್ – ಕಲಿಪಾದ ಸೊರೆನ್
ಮೇದಿನಿಪುರ – ಜೂನ್ ಮಲಿಯಾ (ಶಾಸಕ)
ಪುರುಲಿಯಾ – ಶಾಂತಿರಾಮ್ ಮಹತೋ
ಬಂಕುರಾ – ಅರೂಪ್ ಚಕ್ರವರ್ತಿ (ಶಾಸಕ)
ಬಿಷ್ಣುಪುರ್ – ಸುಜಾತಾ ಮೊಂಡಲ್ ಖಾನ್ (ಪ್ರಸ್ತುತ ಬಿಜೆಪಿ ಸಂಸದರ ಮಾಜಿ ಪತ್ನಿ)
ಬುರ್ದ್ವಾನ್ – ಡಾ ಶರ್ಮಿಳಾ ಸರ್ಕಾರ್
ಬುರ್ದ್ವಾನ್-ದುರ್ಗಾಪುರ- ಕೀರ್ತಿ ಆಜಾದ್ (ಮಾಜಿ ಕ್ರಿಕೆಟಿಗ)
ಅಸನ್ಸೋಲ್ – ಶತ್ರುಘ್ನ ಸಿನ್ಹಾ (ಸಂಸದ)
ಬೋಳೂರು – ಅಸಿತ್ ಮಲ್ (ಸಂಸದ)
ಬಿರ್ಭುಮ್ – ಶತಾಬ್ದಿ ರಾಯ್ (ಸಂಸದ)

Leave a Reply

Your email address will not be published. Required fields are marked *