Lok Sabha Election 2024: ಲೋಕಸಭಾ ಚುನಾವಣೆ ಘೋಷಣೆ: ಮತದಾನದ ವೇಳಾಪಟ್ಟಿ ಇಲ್ಲಿದೆ.

ನವದೆಹಲಿ: ಕೊನೆಗೂ ಘೋಷಿತವಾಯಿತು ಲೋಕಸಭಾ ಚುನಾವಣೆ. ಕೇಂದ್ರ ಚುನಾವಣಾ ಆಯೋಗದಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧಾರ. ಇಂದಿನಿಂದ ದೇಶಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ. ಮೊದಲ ಹಂತದ ಮತದಾನ ಎಪ್ರಿಲ್ 19, ಕೊನೆಯ ಹಂತದ ಮತದಾನ ಜೂನ್ 1 ಫಲಿತಾಂಶ ಜೂನ್ 4 ರಂದು ಪ್ರಕಟ ವಾಗಲಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವಕುಮಾರ ಸುದ್ದಿ ಗೋಷ್ಠಿಯಲ್ಲಿ ಪ್ರಕಟಿಸಿದರು.

ರಾಷ್ಟ್ರವ್ಯಾಪಿ ಚುನಾವಣಾ ವೇಳಾಪಟ್ಟಿಗೆ ಅನುಗುಣವಾಗಿ ಕರ್ನಾಟಕದ ಲೋಕಸಭೆ ಚುನಾವಣೆ ಹಂತ ಹಂತವಾಗಿ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇಂದಿನಿಂದ (ಶನಿವಾರ) ರಾಜ್ಯವು ಮಾದರಿ ನೀತಿ ಸಂಹಿತೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಫಲಿತಾಂಶದವರೆಗೆ ಇದು ಜಾರಿಯಲ್ಲಿರುತ್ತದೆ.

ಮೊದಲ ಹಂತವು ಏಪ್ರಿಲ್ 19 ರಂದು, ಎರಡನೇ ಹಂತವು ಏಪ್ರಿಲ್ 26 ರಂದು, ಮೂರನೇ ಹಂತವು ಮೇ 7 ರಂದು, ನಾಲ್ಕನೇ ಹಂತವು ಮೇ 13 ರಂದು, ಐದನೇ ಹಂತವು ಮೇ 20 ರಂದು, ಆರನೇ ಹಂತವು ಮೇ 25 ರಂದು ಮತ್ತು ಏಳನೇ ಹಂತವು ಜೂನ್ 1 ರಂದು ಫಲಿತಾಂಶ ಬರಲಿದೆ.

Leave a Reply

Your email address will not be published. Required fields are marked *