Nandini Milk: ನಂದಿನಿ ಹಾಲಿನ ದರ ಏರಿಕೆ: ನಾಳೆಯಿಂದ ಪರಿಷ್ಕೃತ ದರ ಜಾರಿ

ಬೆಂಗಳೂರು: ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ನಂದಿನಿ ಹಾಲಿನ ( Nandini Milk ) ದರವನ್ನು ಹೆಚ್ಚಿಸಿದೆ. ಈ ಪರಿಷ್ಕೃತ ದರ ನಾಳೆಯಿಂದಲೇ (ಜೂನ್ 26, 2024) ಜಾರಿಯಾಗಲಿದೆ.
ಇದನ್ನೂ ಓದಿ: CM Siddaramaiah: ಅಂಗನವಾಡಿಯಲ್ಲಿ ಎಲ್ ಕೆಜಿ, ಯುಕೆಜಿ ಆರಂಭಕ್ಕೆ ಸಿಎಂ ಸಮ್ಮತಿ

ಹಾಲಿನ ದರವನ್ನು ಲೀಟರ್‌ಗೆ 2 ರೂ ಹೆಚ್ಚಳ ಮಾಡಲಾಗಿದೆ. ಹಾಲಿನ ದರವನ್ನು 42 ರೂ.ನಿಂದ 44 ರೂ.ಗೆ ಹೆಚ್ಚಿಸಲಾಗಿದೆ. ಈ ಹೊಸ ದರದ ಪ್ರಕಾರ, 1,000 ಮಿಲಿ (1 ಲೀಟರ್) ಇನ್ಮುಂದೆ 1,050 ಎಂಎಲ್‌ ಹೆಚ್ಚುವರಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ. ಮೊಸರು, ಇತರೆ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆ ಮಾಡಿಲ್ಲ. ನಾಳೆಯಿಂದಲೇ ಪರಿಷೃತ ಹಾಲಿನ ದರಗಳು ಜಾರಿಯಾಗಲಿವೆ.

Leave a Reply

Your email address will not be published. Required fields are marked *