Union Budget 2024: 2024-25ರ ಕೇಂದ್ರ ಬಜೆಟ್ ನಲ್ಲಿ ಯಾವುದು ಕಡಿಮೆ, ಯಾವುದು ಹೆಚ್ಚು?

ನವದೆಹಲಿ,Union Budget 2024 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರ 3.0 ಅವಧಿಯ ಮೊದಲ ಬಜೆಟ್‌ ಅನ್ನು ಮಂಡಿಸಿದ್ದು, ಬಜೆಟ್‌ನಲ್ಲಿ ಹಲವಾರು ಸರಕು ಹಾಗೂ ಸೇವೆಗಳ ಮೇಲಿನ ತೆರಿಗೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಜೆಟ್‌ ನಂತರ ಯಾವುದು ಕಡಿಮೆ ಮತ್ತು ಯಾವುದು ಹೆಚ್ಚಾಗುತ್ತಿವೆ ಎಂಬ ವಿವರ ಇಲ್ಲಿದೆ:
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ

ಯಾವುದು ಕಡಿಮೆ:
1. ಚಿನ್ನ, ಬೆಳ್ಳಿ, ಪ್ಲಾಟಿನಂ: ಆಮದು ಸುಂಕ ಕಡಿತ.
2. ತಾಮ್ರ: ತೆರಿಗೆ ಕಡಿತ.
3. ಮೊಬೈಲ್ ಫೋನ್ ಬಿಡಿ ಭಾಗಗಳು: ತೆರಿಗೆ ಕಡಿತ.
4. ಮೊಬೈಲ್ ಫೋನ್: ಬೆಲೆ ಇಳಿಕೆ.
5. ಕ್ಯಾನ್ಸರ್ ಔಷಧಗಳು: ಬೆಲೆ ಇಳಿಕೆ.
6. ಆದಾಯ ತೆರಿಗೆ ಪದ್ಧತಿ: ಸರಳೀಕರಣ.
7. ವಿದೇಶಿ ಬಟ್ಟೆ, ಚರ್ಮ ಉತ್ಪನ್ನಗಳು, ಟಿವಿ: ಬೆಲೆ ಇಳಿಕೆ.
8. 20 ಖನಿಜಗಳು: ಅಬಕಾರಿ ಸುಂಕ ಇಳಿಕೆ.
9. ಸೋಲಾರ್ ಪ್ಯಾನಲ್‌ಗಳು: ಬೆಲೆ ಇಳಿಕೆ.
10. ವಿದ್ಯುತ್ ತಂತಿಗಳು ಮತ್ತು ಎಕ್ಸ್‌ರೇ ಉಪಕರಣಗಳು: ಬೆಲೆ ಇಳಿಕೆ.
11. ಇಕಾಮರ್ಸ್ ಮೇಲಿನ ಟಿಡಿಎಸ್: ಶೇ 1 ರಿಂದ ಶೇ 0.1 ಗೆ ಇಳಿಕೆ.
12. ಸ್ಟಾರ್ಟ್‌ಅಪ್ ವ್ಯವಸ್ಥೆ: ಏಂಜೆಲ್ ಟ್ಯಾಕ್ಸ್ ರದ್ದು.

ಯಾವುದು ಹೆಚ್ಚು:
1. ಮರುಬಳಕೆ ಆಗದ ಪ್ಲಾಸ್ಟಿಕ್ ವಸ್ತುಗಳು: ಬೆಲೆ ಏರಿಕೆ.
2. ವಿವಿಧ ಬಟ್ಟೆ ಮತ್ತು ವಸ್ತ್ರಗಳು: ಬೆಲೆ ಏರಿಕೆ.
3. ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ: ರಾಜ್ಯ ಸರ್ಕಾರಗಳಿಗೆ ಹೆಚ್ಚಳದ ಅವಕಾಶ.
4. ಎಲ್ಲಾ ವಿದ್ಯುತ್ ಉಪಕರಣಗಳು: ಬೆಲೆ ಏರಿಕೆ.
5. ಮೊಬೈಲ್ ಟವರ್ ಬಿಡಿ ಭಾಗಗಳು: ಬೆಲೆ ಏರಿಕೆ.

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಪರಿಸರ ಸ್ನೇಹಿ ನಿಲುವನ್ನು ಅನುಸರಿಸಿ, ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ವಸ್ತುಗಳ ಬೆಲೆ ಹೆಚ್ಚಿಸಿದೆ. ಸೌರ ವಿದ್ಯುತ್ ಬಳಕೆಯನ್ನು ಉತ್ತೇಜಿಸಲು ಮತ್ತು ಜನರ ಆರೋಗ್ಯಕ್ಕಾಗಿ ಕ್ಯಾನ್ಸರ್ ಔಷಧಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಮೊಬೈಲ್ ಫೋನ್, ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳ ಪ್ರೇಮಿಗಳಿಗೆ ಸುಂಕ ಕಡಿತದಿಂದ ಬೆಲೆ ಇಳಿಕೆ ದೊರೆಯಲಿದೆ. ಆದರೆ, ಬಟ್ಟೆ ಮತ್ತು ವಿದ್ಯುತ್ ಉಪಕರಣಗಳ ಬೆಲೆ ಏರಿಕೆಯಾಗಿದ್ದು, ಇದು ಸಾಮಾನ್ಯ ಜನರ ಮೇಲೆ ಹೆಚ್ಚಿನ ಹೊರೆ ಸೃಷ್ಟಿಸುತ್ತದೆ.

Leave a Reply

Your email address will not be published. Required fields are marked *