Headlines

Whatsapp ban: ಭಾರತದಲ್ಲಿ ವ್ಯಾಟ್ಸಪ್ ಬಂದ್ ಆಗುತ್ತದೆಯೇ?

Whatsapp stop service in India: ಇಂದು ಎಲ್ಲರ ಮೊಬೈಲ್ ನಲ್ಲಿ ಮಹತ್ವದ ಮೆಸೇಜ್ ಸ್ಥಾನ ಹೊಂದಿರುವ ವ್ಯಾಟ್ಸಪ್ ಬಂದಾದರೆ ಹೇಗೆ? ಎಂದು ಆಲೋಚಿಸಿದರೆ ದಿಗ್ಭ್ರಮೆ ಉಂಟಾಗುತ್ತದೆ. ಹಾಗೇನಾದರೂ ಆದರೆ ಬದುಕಿನ ಒಂದು ಭಾಗವೇ ಬಂದಾದಂತೆ. ಅಷ್ಟೊಂದು ಎಲ್ಲರೂ ವ್ಯಾಟ್ಸಪ್ ಮೇಲೆ ಅವಲಂಬಿತರಾಗಿದ್ದಾರೆ.

ಕೇಂದ್ರ ಸರಕಾರದ ಬಿಗಿ ಐಟಿ ಕಾನೂನು ಹಾಗೂ ವ್ಯಾಟ್ಸಪ್ ಕಂಪನಿ ಮೆಟಾ ನಡುವೆ ತೀವ್ರವಾದ ಸಂಘರ್ಷ ಉಂಟಾಗಿದೆ. ನೆಲದ ಕಾನೂನಿಗಿಂತ ತನ್ನ ಬಳಕೆದಾರರ ಗೌಪ್ಯತೆ ಮುಖ್ಯ, ಸರಕಾರ ಬಲವಂತ ಮಾಡಿದರೆ ದೇಶ ಬಿಟ್ಟು ಹೋಗುತ್ತೇವೆ ಹೊರತು ಮೆಸೇಜಿನ ಮೂಲವನ್ನು ಕೊಡಲು ಆಗಲ್ಲ. ತನ್ನ ಬಳಕೆದಾರರ ಖಾಸಗೀತನ ಹಾಗೂ ಗೌಪ್ಯತೆ ಕಾಪಾಡುವುದು ನಮ್ಮ ನೀತಿಯಾಗಿದೆ ಎಂದು ಕಂಪನಿ ಹೇಳಿದೆ. ದೆಹಲಿ ಹೈಕೋರ್ಟನಲ್ಲಿ ನಡೆದ ವಿಚಾರಣೆಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ವಿಶ್ವದಾದ್ಯಂತ ನೂರಕ್ಕೂ ಹೆಚ್ಚು ದೇಶಗಳಲ್ಲಿ 280 ಕೋಟಿಗೂ ಮಿಕ್ಕಿ ಬಳಕೆದಾರರು ಇದ್ದು ಭಾರತದಲ್ಲಿಯೇ 50 ಕೋಟಿಗೂ ಅಧಿಕ ಯೂಜರ್ಸ ಇದ್ದಾರೆಂಬ ಅಂದಾಜು ಇದೆ. ಏಕಾಯೇಕಿ ಭಾರತದಲ್ಲಿ ವ್ಯಾಟ್ಸಪ್ ಬಂದಾಗಿಬಿಟ್ಟರೆ ಅದರ ಮೇಲೆ ಅವಲಂಬಿತರಾದ ಜನರ ಪ್ರತಿಕ್ರಿಯೆ ಏನು? ಉಂಟಾಗಬಹುದಾದ ಸಮಸ್ಯೆಗಳೇನು ಎಂಬುದು ಕುತೂಹಲಕಾರಿಯಾಗಿದೆ.

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading