Court Jobs: ಮಂಡ್ಯ ಕೋರ್ಟ್‌ಗಳಲ್ಲಿ 41 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಈಗಲೇ ಅರ್ಜಿ ಸಲ್ಲಿಸಿ
Updated on May 28, 2024
ಎಸ್‌ಎಸ್‌ಎಲ್‌ಸಿ (SSLC) ಪಾಸಾದವರಿಗೆ ಮಂಡ್ಯ ಜಿಲ್ಲೆಯ ಕೋರ್ಟ್‌ಗಳಲ್ಲಿ 41 ಸರ್ಕಾರಿ ಹುದ್ದೆಗಳು ಲಭ್ಯವಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಗಳು ಮತ್ತು ಅರ್ಹತೆಗಳು ನಿಮಗೆ ಈ ವೆಬ್ ವಿಳಾಸದಲ್ಲಿ ಲಭ್ಯವಿವೆ. ಅರ್ಜಿ ಸಲ್ಲಿಸಲು ನಿಮ್ಮ ವಯಸ್ಸು, ಶಿಕ್ಷಣ ಹಾಗೂ ನೇಮಕಾತಿ ಪ್ರಾಧಿಕಾರದ ನಿಯಮಗಳನ್ನು ಪಾಲಿಸಬೇಕು. ಮಂಡ್ಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 41 ಜವಾನರು( ಪೀವನ್) ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸಲು ನಿಮಗೆ ಅನ್ನಿಸುವ ಹುದ್ದೆಗಳ ವಿವರಗಳನ್ನು ನೀಡಿದ್ದೇನೆ
ಹುದ್ದೆ ವಿವರ
| ಹುದ್ದೆಯ ಹೆಸರು :- ಜವಾನರು (ಪೀವನ್) |
|---|
| ಒಟ್ಟು ಹುದ್ದೆ :- 41 |
| ಮಾಸಿಕ ವೇತನ :- 17000-28950 |
| ಶೈಕ್ಷಣಿಕ ವಿದ್ಯಾರ್ಹತೆ :- * ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. * ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು. |
| ವಯೋಮಿತಿ :- * ಅರ್ಜಿ ಹಾಕಲು ಕನಿಷ್ಠ 18 ವರ್ಷ ಪೂರೈಸಿರಬೇಕು. * ಸಾಮಾನ್ಯ ವರ್ಗದವರಿಗೆ 35, * ಒಬಿಸಿ ವರ್ಗದವರಿಗೆ 38, * ಎಸ್‌ಸಿ / ಎಸ್‌ಟಿ, ಪವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯಸ್ಸು ಮೀರಿರಬಾರದು. |
| ಅರ್ಜಿ ಶುಲ್ಕ :- * ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.300. * ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.150. * ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 , ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. |
| ಅರ್ಜಿ ಹಾಕುವ ವಿಧಾನ :- ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 03-05-2024 ರಿಂದ 03-06-2024ವರೆಗೆ ಸಲ್ಲಿಸಬಹುದಾಗಿರುತ್ತದೆ. |
| ಆಯ್ಕೆವಿಧಾನ :- 10ನೇ ತರಗತಿಯ ಗರಿಷ್ಠ ಅಂಕಗಳ ಆಧಾರದಲ್ಲಿ, 1 ಹುದ್ದೆಗೆ 10 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಲಾಗುತ್ತದೆ. |
| ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 03-05-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-06-2024 ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕ: 04-06-2024 |