Headlines

ಎಲೆಕ್ಟ್ರಿಕ್ ವಾಹನಗಳ ವೆಚ್ಚ ಎರಡು ವರ್ಷದಲ್ಲಿ ಪೆಟ್ರೋಲ್ ವಾಹನಗಳಿಗೆ ಸಮ: ಸಚಿವ ನಿತಿನ್ ಗಡ್ಕರಿ

ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಒಂದು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ವೆಚ್ಚವು ಪೆಟ್ರೋಲ್ ವಾಹನಗಳಷ್ಟೇ ಸಮಾನವಾಗುತ್ತದೆ ಎಂದು ಹೇಳಿದ್ದಾರೆ. ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ACMA)ನ 64ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. EVಗಳಿಗೆ ಸಬ್ಸಿಡಿಯನ್ನು ಮುಂದಿನ ದಿನಗಳಲ್ಲಿ ತೆಗೆದುಹಾಕಲಾಗುವುದು ಎಂದು ಅವರು ಹೇಳಿದರು.

ಭಾರತವು ಜಪಾನನ್ನು ಮೀರಿಸಿ ವಿಶ್ವದ ಮೂರನೇ ಅತಿದೊಡ್ಡ ಆಟೋಮೋಟಿವ್ ಉತ್ಪಾದನಾ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಉಲ್ಲೇಖಿಸುತ್ತಾ, ಭಾರತವನ್ನು ನಂಬರ್ ಒನ್ ಆಟೋ ಉತ್ಪಾದನಾ ಕೇಂದ್ರವನ್ನಾಗಿಸಲು ಸರ್ಕಾರದ ಪ್ರಯತ್ನಗಳ ಕುರಿತಂತೆ ವಿವರಿಸಿದರು. 

ಸ್ಕ್ರ್ಯಾಪೇಜ್ ನೀತಿಯು ಉತ್ಪಾದನಾ ವೆಚ್ಚವನ್ನು 30% ಕಡಿಮೆ ಮಾಡುವ ಮೂಲಕ ದೇಶದ ವಾಹನೋದ್ಯಮವನ್ನು ಬಲಪಡಿಸುವುದಲ್ಲದೆ, ಗ್ರಾಹಕರು ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಿದಾಗ ಹೊಸ ವಾಹನಗಳ ಮೇಲೆ ಶೇಕಡಾ 3 ರಷ್ಟು ರಿಯಾಯಿತಿ ಪಡೆಯಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading