Headlines

Ebrahim Raisi: ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ

ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಮೇ 19, 2024 ರಂದು ಹೆಲಿಕಾಪ್ಟರ್ ಪತನದಲ್ಲಿ ನಿಧನವಾಗಿರುವ ಮಾಹಿತಿ ಲಭ್ಯವಾಗಿದೆ. ಈ ದುರಂತದಲ್ಲಿ ವಿದೇಶಾಂಗ ಸಚಿವ ಹೋಸೆನ್ ಅಮೀರ್-ಅಬ್ದೋಲ್ಲಾಹಿಯನ್ ಸೇರಿದಂತೆ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ. ರವಿವಾರ ಪರ್ವತಗಳಲ್ಲಿ ಪತನಗೊಂಡ ಹೆಲಿಕಾಪ್ಟರ್ ನ ಅವಶೇಷಗಳ ರಕ್ಷಣಾ ಪಡೆ ಪತ್ತೆ ಮಾಡಿದೆ.



ಅಧ್ಯಕ್ಷರ ಬೆಂಗಾವಲು ಹೆಲಿಕಾಪ್ಟರ್‌ಗಳಲ್ಲಿ ಇಂಧನ ಸಚಿವ ಅಲಿ ಅಕ್ಬರ್ ಮೆಹ್ರಾಬಿಯಾನ್ ಹಾಗೂ ವಸತಿ ಸಚಿವ ಮೆಹ್ರದಾದ್ ಇದ್ದು ಅವರು ಸುರಕ್ಷಿತವಾಗಿ ಮರಳಿದ್ದಾರೆ. ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಅವಘಡ ಸಂಭವಿಸಿದೆ.




ಘಟನೆ ನಡೆದ ಸ್ಥಳ ಇರಾನ್‌ನ ದೊಡ್ಡ ಪಟ್ಟಣಗಳಲ್ಲಿ ಒಂದಾಗಿರುವ ತಬ್ರಿಜ್‌ನಿಂದ ಸುಮಾರು 100 ಕಿ.ಮೀ. ದೂರದಲ್ಲಿತ್ತು. ಈ ಅಪಘಾತದ ನಂತರ ಇರಾನ್ ಸರ್ಕಾರ ತಾತ್ಕಾಲಿಕ ಸಭೆಯನ್ನು ಕರೆದಿದ್ದು, ಮುಂದಿನ ಕ್ರಮಗಳ ಕುರಿತು ಚರ್ಚೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading