ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ ಅವರು ತಮ್ಮ ಪತ್ನಿ ಆರತಿಗೆ ವಿಚ್ಛೇದನ ಘೋಷಣೆ ಮಾಡಿದ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಆರತಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪತ್ರವೊಂದನ್ನು ಹಂಚಿಕೊಂಡಿರುವ ಆರತಿ, ವಿಚ್ಛೇದನದ ಕುರಿತು ತಾವು ಪೂರ್ಣವಾಗಿ ತಿಳಿಯದೆ ಘೋಷಣೆ ಮಾಡಿರುವುದು ಆಘಾತಕಾರಿ ಎಂದು ಹೇಳಿದ್ದಾರೆ.
ಅವರು ತಮ್ಮ ಪತಿಯೊಂದಿಗೆ ನೇರವಾಗಿ ಸಂಭಾಷಣೆ ಮಾಡಲು ಪ್ರಯತ್ನಿಸಿದರೂ, ಅದು ವಿಫಲವಾಗಿದ್ದು, ಈ ದಿಢೀರ್ ಘೋಷಣೆಯಿಂದ ತಮ್ಮ ಮತ್ತು ಮಕ್ಕಳ ಜೀವನದಲ್ಲಿ ಅತೀವ ಬೇಸರವನ್ನುಂಟು ಮಾಡಿದೆ ಎಂದು ಹೇಳಿದರು. ಅರ್ಹ ಗೌಪ್ಯತೆ ಮತ್ತು ಗೌರವವನ್ನು ಹೊಂದಿರುವಂತಹ ವಿಷಯಗಳನ್ನು ಈ ರೀತಿ ಸಾರ್ವಜನಿಕವಾಗಿ ತರುವುದಿಲ್ಲವೆಂದು ಆರತಿ ಅಭಿಪ್ರಾಯಪಟ್ಟಿದ್ದಾರೆ.