Headlines

Upendraa: ಉಪೇಂದ್ರ ಅವರ ಬಹುನಿರೀಕ್ಷಿತ ‘ಯುಐ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಬೆಂಗಳೂರು: ಉಪೇಂದ್ರ (Upendraa) ಅವರ ಬಹುನಿರೀಕ್ಷಿತ ‘ಯುಐ’ ಚಿತ್ರ ಡಿಸೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಎಂಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. 

ಪ್ರಾರಂಭದಲ್ಲಿ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಾಗಿದ್ದರೂ, ಗ್ರಾಫಿಕ್ಸ್‌ ಕೆಲಸದ ಕಾರಣದಿಂದ ಸಾಕಷ್ಟು ಸಮಯ ವಿಳಂಬವಾಯಿತು. ಈಗ ಈ ವರ್ಷಾಂತ್ಯಕ್ಕೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಫಿಕ್ಸ್ ಮಾಡಲಾಗಿದೆ.

ಈ ಚಿತ್ರದ ಹೆಸರು ‘ಯು’ ಮತ್ತು ‘ಐ’ (ನಾನು ಮತ್ತು ನೀನು) ಎಂಬ ತಾತ್ಪರ್ಯವನ್ನು ಹೊಂದಿದ್ದು, ನಿರ್ದೇಶಕ ಉಪೇಂದ್ರ ಅವರ ವಿಶಿಷ್ಟ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ನಟಿ ರೀಷ್ಮಾ ನಾಣಯ್ಯ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಕೆ.ಪಿ. ಶ್ರೀಕಾಂತ್ ಮತ್ತು ಜಿ. ಮನೋಹರನ್ ಬಂಡವಾಳ ಹೂಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading