Headlines

Paris Olympics : ಶೂಟಿಂಗ್ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಸ್ವಪ್ನಿಲ್ ಕುಸಾಲೆಗೆ ಕಂಚು

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಪುರುಷರ ಶೂಟಿಂಗ್ ವೈಯಕ್ತಿಕ 50 ಮೀಟರ್ ವಿಭಾಗದ ರೈಫಲ್ 3 ಪೊಸಿಷನ್‌ನಲ್ಲಿ ಭಾರತದ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: Karnataka: ರಾಜ್ಯದಲ್ಲಿ ಭಾರಿ ಮಳೆಯ ಪರಿಣಾಮ, ಕಟ್ಟೆಚ್ಚರ ವಹಿಸಲು ಡಿಸಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಸ್ವಪ್ನಿಲ್ 50 ಮೀಟರ್‌ ರೈಫಲ್ 3 ಪೊಸಿಷನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನ್ನುವ ಹೆಗ್ಗಲಿಕೆಯನ್ನು ಹೊಂದಿದ್ದಾರೆ. ಶತೋಹು ಶೂಟಿಂಗ್ ರೇಂಜ್‌ನಲ್ಲಿ ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಗಳಿಸಿ, ಅವರು ಫೈನಲ್ ಪ್ರವೇಶಿಸಿದರು. 8 ಮಂದಿ ಸ್ಪರ್ಧಿಸಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಕುಸಾಲೆ ಮೂರನೇ ಸ್ಥಾನ ಪಡೆದರು.
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ

ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್‌ ಕಂಚಿನ ಪದಕ ಗೆದ್ದು ದೇಶಕ್ಕೆ ಮೊದಲ ಪದಕ ತಂದುಕೊಟ್ಟಿದ್ದರು. ನಂತರ ಮನು ಭಾಕರ್‌ ಹಾಗೂ ಸರಬ್‌ಜೊತ್‌ ಸಿಂಗ್ ಜೋಡಿ ಮಿಶ್ರ ತಂಡದ 10 ಮೀಟರ್‌ ಏರ್‌ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಈಗ ಶೂಟಿಂಗ್‌ನಲ್ಲಿ ಸ್ವಪ್ನಿಲ್ ಕುಸಾಲೆ ದೇಶಕ್ಕೆ ಮೂರನೇ ಪದಕ ತಂದುಕೊಟ್ಟಿದ್ದಾರೆ. ಶೂಟಿಂಗ್ ವಿಭಾಗದಲ್ಲಿ ಈ ಮೂರು ಪದಕಗಳನ್ನು ಗೆದ್ದಿರುವುದು ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲು.

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading