Headlines

Rahul Dravid : 2028ರಲ್ಲಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ: ರಾಹುಲ್ ದ್ರಾವಿಡ್ ಪ್ರತಿಕ್ರಿಯೆ

ಫ್ರಾನ್ಸ್, ಪ್ಯಾರಿಸ್: ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid), 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆಗೆ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿ, ಇದೊಂದು ಸಾಧಾರಣ ಬೆಳವಣಿಗೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ: ಐಎಎಸ್ ಕೋಚಿಂಗ್ ಸೆಂಟರ್‌ಗೆ ನೀರು ತುಂಬಿ ಮೂವರು ಅಭ್ಯರ್ಥಿಗಳ ಸಾವು

ಡ್ರೀಮ್ ಸ್ಪೋರ್ಟ್ಸ್ ಆಯೋಜಿಸಿದ್ದ ’ಕ್ರಿಕೆಟ್ ಅಟ್ ದಿ ಒಲಿಂಪಿಕ್ಸ್–ಡಾನ್ ಆಫ್ ಎ ನ್ಯೂ ಎರಾ’ ಎಂಬ ಚರ್ಚಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ದ್ರಾವಿಡ್, `ನಾನು ಮತ್ತು ನೀವು ಕ್ರೀಡೆಯ ಪ್ರೇಮಿಗಳು, ಒಲಿಂಪಿಕ್ಸ್ ನೋಡಿಕೊಂಡೇ ಬೆಳೆದಿದ್ದೇವೆ. ಕಾರ್ಲ್ ಲೆವಿಸ್ ಮೊದಲಾದ ಅದ್ಭುತ ಅಥ್ಲೀಟ್‌ಗಳ ಆಟವನ್ನು ನೋಡಿ ಪ್ರಭಾವಿತರಾಗಿದ್ದೇವೆ. ಕ್ರಿಕೆಟ್ ಕೂಡಾ ಒಲಿಂಪಿಕ್ಸ್‌ನಂತಹ ಉತ್ಸಾಹಭರಿತ ಕೂಟಗಳಲ್ಲಿ ಭಾಗವಹಿಸಬೇಕು ಎಂಬುದು ಕ್ರೀಡಾಳುವಿನ ಕನಸು’ ಎಂದು ಹೇಳಿದರು.
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ

ಈ ಚರ್ಚಾ ಕಾರ್ಯಕ್ರಮದಲ್ಲಿ ಐಸಿಸಿ ಸಿಇಒ ಜಿಯೋಫ್ ಅಲ್ಲಾರ್ಡಿಸ್ ಮತ್ತು ಡ್ರೀಮ್ ಸ್ಫೋರ್ಟ್ಸ್‌ನ ಸಿಇಒ ಹರ್ಷ ಜೈನ್ ಸಹ ಭಾಗವಹಿಸಿದ್ದರು. ಅಲ್ಲಾರ್ಡಿಸ್, ಅಮೆರಿಕ ತಂಡದ ಟಿ–20 ವಿಶ್ವಕಪ್ ಪ್ರದರ್ಶನ ಕುರಿತು ಮಾತನಾಡಿ, `ಕ್ರಿಕೆಟ್ ಬಗ್ಗೆ ಗೊತ್ತಿಲ್ಲದ ಜನರೂ ಯುಎಸ್‌ಎ ತಂಡದ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಅಮೆರಿಕ ಸ್ಪರ್ಧಾತ್ಮಕ ತಂಡ ಹೊಂದಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು ಮೆಟ್ರೋ 2ನೇ ಹಂತ ಕಾಮಗಾರಿ ವಿಳಂಬ: ವೆಚ್ಚ 40,000 ಕೋಟಿ ರೂ.ಗೆ ಏರಿಕೆ

ಜೈನ್, `ಐಸಿಸಿಯಲ್ಲಿ 100ಕ್ಕೂ ಅಧಿಕ ಸದಸ್ಯರಿದ್ದಾರೆ. ಅರ್ಧ ಜಗತ್ತಿಗಿಂತ ಹೆಚ್ಚು ದೇಶಗಳಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ದೊಡ್ಡ ಗೆಲುವಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಅಮೆರಿಕದಲ್ಲಿ ಕ್ರಿಕೆಟ್ ಬಗ್ಗೆ ಅಭಿಮಾನವಿದೆ ಎಂದು ದ್ರಾವಿಡ್, `ಅಮೆರಿಕದಲ್ಲಿ ಕ್ರಿಕೆಟ್‌ಗೆ ಅಭೂತಪೂರ್ವ ಪ್ರೇಕ್ಷಕರಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗಳನ್ನು ನೋಡಲು ಜನರು ಬೇರೆಡೆಗೆ ಪ್ರಯಾಣ ಬೆಳೆಸುತ್ತಾರೆ. ಕ್ರಿಕೆಟ್ ಬೆಳೆಯುತ್ತಿರುವುದು ಅಭೂತಪೂರ್ವ’ ಎಂದು ಹೇಳಿದರು.

ತಾವು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನೋಡಲು ಹಾತೊರೆಯುತ್ತಿರುವುದಾಗಿ ಮತ್ತು ಇದು ಸಾಮಾನ್ಯ ಬೆಳವಣಿಗೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading