ಲೋಕಸಭಾ ಚುನಾವಣೆಯ ಫಲಿತಾಂಶ ಎಕ್ಸಿಟ್ ಪೋಲ್‌ಗಳಲ್ಲಿ (Exit Poll) ತೋರಿಸಿರುವ ಫಲಿತಾಂಶಕ್ಕೆ ಸಂಪೂರ್ಣ ಭಿನ್ನವಾಗಿ ಇರುತ್ತದೆ ಎಂದು ತುಂಬಾ ವಿಶ್ವಾಸ ಇದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಜೂನ್ 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ.
ಮಂಗಳವಾರ ಪ್ರಕಟವಾಗಲಿರುವ ಫಲಿತಾಂಶದ ಬಗ್ಗೆ ತಮ್ಮ ನಿರೀಕ್ಷೆ ಏನಿದೆ ಎಂಬುದನ್ನು ಅವರು ತಿಳಿಸಿದರು. “ನಾವು ಕಾಯಬೇಕು, ಕಾದು ನೋಡಬೇಕು” ಎಂದು ಸೋನಿಯಾ ಅವರು ತಿಳಿಸಿದ್ದಾರೆ. ಎಕ್ಸಿಟ್ ಪೋಲ್ ಗಿಂತ ನಿಜವಾದ ಅಂಶ ಬೇರೆಯೇ ಇದೆ. ಮಂಗಳವಾರದಂದು ವಾಸ್ತವ ಏನೆಂಬುದು ತಿಳಿಯಲಿದೆ ಎಂದು ಅತ್ಯಂತ ವಿಶ್ವಾಸ ವ್ಯಕ್ತಪಡಿಸಿದರು. ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ






