ವಯನಾಡಿನ ಭೂಕುಸಿತದಿಂದಾಗಿ ಅನೇಕ ಕಲಾವಿದರು ಕೂಡ ಸಹಾಯ ಮಾಡುತ್ತಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಮತ್ತು ನಟ ಮೋಹನ್ ಲಾಲ್ ಅವರ ವಿಶ್ವಶಾಂತಿ ಫೌಂಡೇಷನ್ ಮುಂಡಕ್ಕೈ ಸರ್ಕಾರಿ ಶಾಲೆಯನ್ನು ಪುನರ್ನಿರ್ಮಾಣ ಮಾಡಲು ₹3 ಕೋಟಿ ನೀಡಲಿದೆ. ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ
ಇನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಮಲ್ ಹಾಸನ್ ₹25 ಲಕ್ಷ, ಸೂರ್ಯ, ಜ್ಯೋತಿಕಾ ಮತ್ತು ಕಾರ್ತಿ ₹50 ಲಕ್ಷ, ಮಮ್ಮುಟ್ಟಿ ₹20 ಲಕ್ಷ, ದುಲ್ಕರ್ ಸಲ್ಮಾನ್ ₹15 ಲಕ್ಷ, ಫಹಾದ್ ಫಾಸಿಲ್ ಮತ್ತು ನಜ್ರಿಯಾ ₹25 ಲಕ್ಷ, ಟೊವಿನೋ ಥಾಮಸ್ ₹25 ಲಕ್ಷ ದೇಣಿಗೆ ನೀಡಿದ್ದಾರೆ.
ಈ ಭೂಕುಸಿತದಲ್ಲಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ, ಹಾಗೂ 300ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.