ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಥಾಯ್ಲೆಂಡ್ ನಿಂದ ಬಂದ ಮೂರು ವಿದೇಶಿಗರು ಚಿನ್ನಾಭರಣಗಳನ್ನು ಸಾಗಿಸಲು ಪ್ರಯತ್ನಿಸಿದ್ದು, ಅಧಿಕಾರಿಗಳು 2.44 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಈ ಚಿನ್ನವು ಲಾಭದ ಮೌಲ್ಯದಲ್ಲಿ ಸುಮಾರು 1.71 ಕೋಟಿ ರೂಪಾಯಿಗಳ ಮೌಲ್ಯವನ್ನು ಹೊಂದಿತ್ತು.
ವಿದೇಶದಿಂದ ಬಂದ ಮೂರು ಯಾತ್ರಿಕರು ಅಖ್ರಮವಾಗಿ ರಿಂಗ್ ಗಳಿಗೆ ಕಚ್ಚಾ ಬಂಗಾರವನ್ನು ಅಡಗಿಸಿಕೊಂಡು ಅದನ್ನು ಥಾಯ್ ಏರ್ ಲೈಸ್ ವಿಮಾನದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಸಾಗಿಸಲು ಪ್ರಯತ್ನಿಸಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
