Headlines

Kiccha Sudeep : ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದ ಟೀಸರ್ ರಿಲೀಸ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನ ನಟ ‘ಕಿಚ್ಚ’ ಸುದೀಪ್ (Kiccha Sudeep) ನಟನೆಯ ‘ಮ್ಯಾಕ್ಸ್‌’ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರತಂಡದ ಪ್ರಕಾರ, ಆಗಸ್ಟ್ 15 ರಂದು ಸಿನಿಮಾ ಥಿಯೇಟರ್‌ಗಳಲ್ಲಿ ಬರಲಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ‘ಪುಷ್ಪ’ ಖ್ಯಾತಿಯ ಸುನೀಲ್‌, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಶರತ್‌ ಲೋಹಿತಾಶ್ವ, ಪ್ರಮೋದ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ: 2.44 ಕೆಜಿ ಚಿನ್ನ ವಶಕ್ಕೆ

ಟೀಸರ್‌ನಲ್ಲಿ ನಿರ್ದೇಶಕರು ಬಹಳಷ್ಟು ಮಾಹಿತಿಯನ್ನು ಬಿಟ್ಟುಹೋಗಿಲ್ಲ. ಜನಪ್ರಿಯ ‘ಬಾ ಬಾ ಬ್ಲಾಕ್ ಶೀಪ್’ ಇಂಗ್ಲೀಷ್ ಪದ್ಯದ ಸಾಹಿತ್ಯವನ್ನು ಬದಲಾವಣೆ ಮಾಡಿ, ಟೀಸರ್‌ನಲ್ಲಿ ಬಳಸಲಾಗಿದೆ. ಈ ಮೂಲಕ ಕೆಲವು ಸುಳಿವುಗಳನ್ನು ಮಾತ್ರ ನೀಡಲಾಗಿದೆ. “ಬಾ ಬಾ ಬ್ಲಾಕ್ ಶೀಪ್, ಹ್ಯಾವ್ ಯೂ ಎನಿ ಕ್ಲೂ?” ಎಂಬ ಸಾಲನ್ನು ನಟ ಟೀಸರ್‌ನಲ್ಲಿ ಹೇಳುತ್ತಾರೆ.
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ
‘ಜೈಲರ್‌’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ ಕೆವಿನ್‌ ಕುಮಾರ್‌ ‘ಮ್ಯಾಕ್ಸ್‌’ನ ಕ್ಲೈಮ್ಯಾಕ್ಸ್‌ ದೃಶ್ಯಗಳ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಈ ಚಿತ್ರದ ಸಂಗೀತ ಸಂಯೋಜನೆ ಮಾಡಿದ್ದು, ವಿ‌ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್. ತನು ಮತ್ತು ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading