Headlines

UPSC Chairperson: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ, ಕಾರಣವೇನು?”

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ (UPSC Chairperson) ಅಧ್ಯಕ್ಷ ಮನೋಜ್ ಸೋನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

2029ರ ಮೇವರೆಗೆ ಅವರ ಕಾರ್ಯಕಾಲ ಮುಂದುವರೆಯಬೇಕಾಗಿತ್ತು, ಐಎಎಸ್‌ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ನೇಮಕಾತಿ ಕುರಿತಾದ ವಿವಾದ ಹಾಗೂ ಆರೋಪಗಳಿಗೆ ಇದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವೈಯಕ್ತಿಕ ಕಾರಣಗಳಿಂದಲೇ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಮನೋಜ್ ಸೋನಿ ಹೇಳಿದ್ದಾರೆ.
ಇದನ್ನೂ ಓದಿ: 7ನೇ ವೇತನ ಆಯೋಗದ ಶಿಫಾರಸಿಗೆ ₹18,000 ಕೋಟಿ ಅಗತ್ಯ: ಡಾ. ಜಿ. ಪರಮೇಶ್ವರ್
ಮನೋಜ್ ಸೋನಿ ಅವರು ಹದಿನೈದು ದಿನಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಆದಾಗ್ಯೂ, ಅವರ ರಾಜೀನಾಮೆಯನ್ನು ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಇನ್ನು ಒಪ್ಪಿಕೊಂಡಿಲ್ಲ ಎಂದು ತಿಳಿಸಿದೆ.

ಖ್ಯಾತ ಶಿಕ್ಷಣ ತಜ್ಞರಾದ 59 ವರ್ಷದ ಮನೋಜ್ ಸೋನಿ ಅವರು 2017ರ ಜೂನ್ 28ರಂದು ಯುಪಿಎಸ್‌ಸಿ ಸದಸ್ಯರಾಗಿ ಅಧಿಕಾರ ವಹಿಸಿಕೊಂಡು, 2023ರ ಮೇ 16ರಂದು ಯುಪಿಎಸ್‌ಸಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ಕಾರ್ಯಾವಧಿ 2029ರ ಮೇ 15ರಂದು ಪೂರ್ಣಗೊಳ್ಳಬೇಕಿತ್ತು.

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading